ಕ್ಯಾಟರೈನಿ
	
ಪ್ರೈಮೇಟ್ ಗಣದ ಆಂಥ್ರೋಪಾಯ್ಡಿಯ ಉಪಗಣಕ್ಕೆ ಸೇರಿದ ಒಂದು ಅಧಿಕುಟುಂಬ (ಸೂಪರ್ ಫ್ಯಾಮಿಲಿ). ಸರ್ಕೊಪಿತಿಕಾಯ್ಡಿಯ ಎಂಬುದು ಇದರ ಇತ್ತೀಚಿನ ಹೆಸರು. ಒಂದಕ್ಕೊಂದು ಬಹು ಹತ್ತಿರದಲ್ಲಿರುವ ಎರಡು ನಾಸಿಕರಂಧ್ರಗಳು, ದವಡೆಸಂಚಿಗಳು, ಬಾಲ ಇಲ್ಲದಿರುವಿಕೆ ಇವುಗಳ ಮುಖ್ಯ ಲಕ್ಷಣಗಳು. ರಜಸ್ಸಿನ ಚಕ್ರದಲ್ಲಿ ರಕ್ತಸ್ರಾವವಾಗುವುದು ಈ ಗುಂಪಿನ ಕೋತಿಗಳ ಇನ್ನೊಂದು ವಿಶೇಷಗುಣ. 

	ಮಾನವನನ್ನೂ ಏಷ್ಯ ಮತ್ತು ಆಫ್ರಿಕಗಳಲ್ಲಿ ಕಾಣಬರುವ ಹಲವಾರು ಬಗೆಯ ವಾನರಗಳನ್ನೂ ಒಳಗೊಂಡಿರುವ ಸುಮಾರು 17 ಜಾತಿಯ ಕಪಿಗಳು ಈ ಗುಂಪಿಗೆ ಸೇರಿವೆ. 		(ನೋಡಿ- ಪ್ರೈಮೇಟುಗಳು) 		  		 (ಎಚ್.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ